ಕರ್ನಾಟಕದಲ್ಲಿ ಮಕ್ಕಳು

ಮಾನವ ಅಭಿವೃದ್ಧಿ ಅನೇಕ ಸೂಚಕಗಳನ್ನು ಅವಲಂಬಿಸಿರುತ್ತವೆ ಹಾಗೂ ಇದರಲ್ಲಿ ಪ್ರಾಮುಖ್ಯವಾದ ಗುಂಪು ಮಕ್ಕಳಲ್ಲಿ ಬಾಲ ಕಾರ್ಮಿಕತೆ, ಬಾಲ ವಿವಾಹ, ಮತ್ತು ಮಕ್ಕಳ ಕಳ್ಳ ಸಾಗಾಟ ಘಟಣೆ ಸಮಸ್ಯೆಗಳು ಹೆಚ್ಚಾಗಿರುವುದು ಕಂಡು ಬಂದಿದೆ.

A Young happy mother looking at her son who has improved with handsome weightgain after getting treated for SAM in Chikkabalapur Nutrition Rehabilitation Centre (NRC) Karnataka.
UNICEF/UNI216247/Edwards

ಮುಂದಿರುವ ಸವಾಲು

ಕರ್ನಾಟಕ ಮೂರು ಭೌಗೋಳಿಕ ವಲಯಗಳನ್ನು ಹೊಂದಿದೆ – ಕರಾವಳಿ ಪ್ರದೇಶ, ಪಶ್ಚಿಮ ಘಟ್ಟದ ಉದ್ದಕ್ಕೂ ಹಬ್ಬಿರುವ ಬೆಟ್ಟ-ಗುಡ್ಡ ಪ್ರದೇಶ ಹಾಗೂ ಡೆಕ್ಕನ್ ಪ್ರಸ್ಥಭೂಮಿಯನ್ನು ಒಳಗೊಂದಡಿರುವ ಮೈದಾನ ಪ್ರದೇಶ. ಕಳೆದ ಎರಡು ದಶಕಗಳಲ್ಲಿ ಕರ್ನಾಟಕ ಆರ್ಥಿಕವಾಗಿ ಸಾಕಷ್ಟು ಪ್ರಗತಿಯನ್ನು ಕಂಡಿರುವ ಕಾರಣ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಸಾಮಾಜಿಕ ಅಭಿವೃದ್ಧಿ ಮೇಲೆ ಕರ್ನಾಟಕ ತನ್ನ ಹೂಡಿಕೆಯನ್ನು ಮಾಡಿದೆ.

ಹಾಗಿದ್ದರೂ, ಪರಿಶಿಷ್ಟ ಜಾತಿ, ಬುಡಕಟ್ಟು ಜನಾಂಗ ಮತ್ತು ಅಲ್ಪಸಂಖ್ಯಾತರೇ ಹೆಚ್ಚಾಗಿರುವ ರಾಜ್ಯದ ಉತ್ತರ ಭಾಗವು ಹಲವಾರು ಮಾನವ ಅಭಿವೃದ್ಧಿ ಸೂಚಕಗಳಲ್ಲಿ ಹಿಂದುಳಿಯುವುದು ಹಾಗೆಯೇ ಮುಂದುವರೆದಿದೆ.  ಬಾಲ ಕಾರ್ಮಿಕ ಪದ್ಧತಿ, ಬಾಲ್ಯವಿವಾಹ ಮತ್ತು ಮಕ್ಕಳ ಸಾಗಣೆ ಮಾರಾಟದ ಘಟನೆಗಳು ಈ ಪ್ರದೇಶದಿಂದ ಅಧಿಕವಾಗಿ ವರದಿಯಾಗುತ್ತಿವೆ. ಬೆಂಗಳೂರು, ಮೈಸೂರು ಮತ್ತು ಇತರ ಸಣ್ಣ-ಪುಟ್ಟ ನಗರಗಳು ವೇಗವಾಗಿ ನಗರೀಕರಣಗೊಳ್ಳುತ್ತಿರುವ ಕಾರಣದಿಂದಾಗಿ ರಾಜ್ಯದ ಉತ್ತರ ಭಾಗದಿಂದ ಮತ್ತು ಬೇರೆ ರಾಜ್ಯಗಳಿಂದ ವಯಸ್ಕರು ಮತ್ತು ಮಕ್ಕಳು ಅಧಿಕ ಸಂಖ್ಯೆಗಳಲ್ಲಿ ಇಲ್ಲಿಗೆ ವಲಸೆ ಬರುತ್ತಿದ್ದಾರೆ.

ಒಟ್ಟು ಜನಸಂಖ್ಯೆಯ ಸುಮಾರು ಶೇಕಡಾ 20.9 ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಸುಸ್ಥಿರ ಅಭಿವೃದ್ಧಿ ಗುರಿಗಳು (SDG) ಮತ್ತು ವಿಶ್ವ ಆರೋಗ್ಯ ಮಹಾಸಭೆ ಗುರಿಗಳೊಂದಿಗೆ ಸಹಯೋಗ ಮಾಡಿಕೊಳ್ಳುತ್ತಾ ರಾಜ್ಯ ತನ್ನ ದೂರದೃಷ್ಟಿ 2025 ಯೋಜನೆಯ ಭಾಗವಾಗಿ ಪೌಷ್ಠಿಕಾಂಶ ನೀತಿಯನ್ನು ಅನುಷ್ಠಾನಗೊಳಿಸುತ್ತಿದೆ ಮತ್ತು ಸಾರ್ವತ್ರಿಕ ಉದ್ದೇಶಿತ ಯೋಜನೆಗಳ ಮೂಲಕ ಪೂರಕ ಪೌಷ್ಟಿಕಾಂಶದ ಜಾಲವನ್ನು ವಿಸ್ತರಿಸುತ್ತಿದೆ.  

ಸ್ಥಳೀಯ ಸಂಸ್ಥೆಗಳು ಮತ್ತು ಸಮುದಾಯಗಳು ಅಭಿವೃದ್ಧಿ ಚಟುವಟಿಕೆಗಳಲ್ಲಿ ಭಾಗವಹಿಸಲು ಅಧಿಕಾರ ನೀಡುವ ಸಂವಿಧಾನದ 73 ನೇ ಮತ್ತು 74 ನೇ ತಿದ್ದುಪಡಿ ಪ್ರಕಾರ ದೇಶದಲ್ಲಿ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಜಾರಿಗೊಳಿಸಿರುವ ಅನೇಕ ರಾಜ್ಯಗಳಲ್ಲಿ ಕರ್ನಾಟಕ ಕೂಡಾ ಒಂದಾಗಿದೆ.

ರಾಜ್ಯದ ಕೆಲವು ಪ್ರಮುಖ ಸೂಚಕಗಳಾದ ನವಜಾತ ಶಿಶುಗಳ ಮರಣ ಪ್ರಮಾಣ ಪ್ರತಿ 1000 ಜೀವಂತ ಜನನಗಳಿಗೆ ಕೇವಲ 19 ಆಗಿದೆ ಮತ್ತು ಹೆರಿಗೆ ಸಮಯದಲ್ಲಿ ತಾಯಂದಿರ ಮರಣ ಅನುಪಾತ  1,00,000 ಜೀವಂತ ಜನನಗಳಿಗೆ ಅತಿಹೆಚ್ಚು 133 ಆಗಿದೆ ಎಂದು ಕಂಡು ಬಂದಿದೆ (ಮೂಲ: ಸ್ಯಾಂಪಲ್  ರಿಜಿಸ್ಟ್ರೇಶನ್ ಸಿಸ್ಟಮ್ 2015). ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ (NFHS) 4 ಪ್ರಕಾರ ಐದು ವರ್ಷಕ್ಕಿಂತ ಕೆಳಗಿನ ಪ್ರಾಯದ ಮಕ್ಕಳಲ್ಲಿ ಶೇಕಡಾ 36 ರಷ್ಟು ಕುಂಠಿತ ಬಳವಣಿಗೆಯನ್ನು (ಸ್ಟಂಟಿಂಗ್‌) ಹಾಗೂ ಐದು ವರ್ಷಕ್ಕಿಂತ ಕಡಿಮೆ ಪ್ರಾಯದ ಶೇಕಡಾ 26 ರಷ್ಟು ಮಕ್ಕಳು ಕ್ಷೀಣ ಬೆಳವಣಿಗೆಯನ್ನು (ವೇಸ್ಟಿಂಗ್‌) ಹಾಗೂ ಶೇಕಡಾ 10.5 ರಷ್ಟು ಮಕ್ಕಳು ತೀರ್ವ ಕ್ಷೀಣತೆಯನ್ನು ಹೊಂದಿದ್ದಾರೆ. ರಾಜ್ಯದಲ್ಲಿ ಗ್ರಾಮೀಣ ಶುಚಿತ್ವ ವ್ಯಾಪ್ತಿ ಶೇಕಡಾ 86 ರಷ್ಟಾಗಿದೆ (ಸ್ವಚ್ಛ ಭಾರತ ಅಭಿಯಾನ MIS). ವಾರ್ಷಿಕ ಸ್ಥಾನ-ಮಾನ ಶೈಕ್ಷಣಿಕ ವರದಿ 2016 ರ ಪ್ರಕಾರ 10 ವರ್ಷಗಳ ನಂತರ ಸರಕಾರಿ ಅನುದಾನಿತ ಶಾಲೆಗಳಲ್ಲಿನ ಆರಂಭಿಕ ತರಗತಿಗಳಲ್ಲಿ ಓದುವಿಕೆ ಮತ್ತು ಗಣಿತದ ಮಟ್ಟದಲ್ಲಿ ಹೆಚ್ಚಳ ಉಂಟಾಗಿದೆ ಎಂದು ಕಂಡು ಬಂದಿದೆ. NFHS-4,  ಪ್ರಕಾರ 20-24 ವರ್ಷ ಪ್ರಾಯದ ಮಹಿಳೆಯರಲ್ಲಿ ಶೇಕಡಾ 21.2 ರಷ್ಟು ಮಹಿಳೆಯರಿಗೆ 18 ವರ್ಷಕ್ಕಿಂತಲೂ ಕಡಿಮೆ ಪ್ರಾಯದಲ್ಲಿ ವಿವಾಹವಾಗಿದೆ ಎಂದು ಕಂಡು ಬಂದಿದೆ.

ಮಕ್ಕಳ ಹಕ್ಕುಗಳು ಮತ್ತು ಯೋಗಕ್ಷೇಮದಲ್ಲಿ ಮುನ್ನಡೆ

ಕಳೆದ ಎರಡು ದಶಕಗಳಲ್ಲಿ ಕರ್ನಾಟಕ ಆರ್ಥಿಕವಾಗಿ ಸಾಕಷ್ಟು ಪ್ರಗತಿಯನ್ನು ಕಂಡಿರುವ ಕಾರಣ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಸಾಮಾಜಿಕ ಅಭಿವೃದ್ಧಿ ಮೇಲೆ ಕರ್ನಾಟಕ ತನ್ನ ಹೂಡಿಕೆಯನ್ನು ಮಾಡಿದೆ.

ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಆರೋಗ್ಯ, ಸಂತಾನೋತ್ಪತ್ತಿ, ಹೆರಿಗೆ, ನವಜಾತ ಶಿಶು, ಮಕ್ಕಳು ಮತ್ತು ಅಪ್ರಾಪ್ತ ವಯಸ್ಕರ ಆರೋಗ್ಯ (RMNCH+A)  ಕಾರ್ಯತಂತ್ರ ಮೊದಲಾದವುಗಳಿಗೆ ಸಂಬಂಧಿಸಿದಂತೆ ಸರಕಾರದ ಪ್ರಮುಖ ಕಾರ್ಯಕ್ರಮ ಅನುಷ್ಠಾನಗೊಳಿಸುವಲ್ಲಿ ಯುನಿಸೆಫ್ ಪ್ರಮುಖ ಅಭಿವೃದ್ಧಿ ಪಾಲುದಾರರಾಗಿ ಪಾತ್ರ ವಹಿಸಿತ್ತು. ನವಜಾತ ಶಿಶುಗಳಿಗೆ ಹಾಲುಣಿಸುವಿಕೆ ಪದ್ಧತಿಗಳನ್ನು ಅಭಿವೃದ್ಧಿಪಡಿಸುತ್ತಾ ಮತ್ತು ತೀವ್ರವಾದ ಅಪೌಷ್ಠಿಕತೆಗೆ ಸರಿಯಾದ ಚಿಕಿತ್ಸೆ ನೀಡುತ್ತಾ ನವಜಾತ ಶಿಶು ಮತ್ತು  ಎಳೆಯ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಮತ್ತು ಅಪೌಷ್ಟಿಕತೆ ಕಡಿಮೆಯಾಗಲೂ ಸಹ ರಾಜ್ಯಕ್ಕೆ ನೆರವು ನೀಡಲಾಗಿತ್ತು.

 ಶುಚಿತ್ವವನ್ನು ಹೆಚ್ಚಿಸುವುದಕ್ಕಾಗಿ ಯುನಿಸೆಫ್ ಅತೀವ ಗಮನ ಹರಿಸುತ್ತದೆ. ಬಯಲು ಪ್ರದೇಶಗಳಲ್ಲಿ ಮಲಮೂತ್ರ  ವಿಸರ್ಜನೆಯನ್ನು ತಡೆಗಟ್ಟುವುದಕ್ಕಾಗಿ ಹಾಗೂ ಸ್ವಚ್ಛ ಮತ್ತು ಸುರಕ್ಷಿತ ಕುಡಿಯುವ ನೀರು ಒದಗಿಸುವುದಕ್ಕಾಗಿ  ರಾಜ್ಯ ಸರಕಾರ ಮಾಡುವ ಪ್ರಯತ್ನಗಳಿಗೆ ಬೆಂಬಲ ನೀಡುತ್ತಾ ಬಂದಿದೆ

ಶಿಕ್ಷಣದ ಬಗ್ಗೆ ಕೆಲಸ ಮಾಡುತ್ತಾ ಯುನಿಸೆಫ್, ಬಾಲಕ ಮತ್ತು ಬಾಲಕಿಯರಿಗೆ ಶಿಕ್ಷಣಕ್ಕಾಗಿ ಸಮಾನ ಅವಕಾಶ ಮತ್ತು ಲಭ್ಯತೆ ಹೊಂದಿರುವ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸಬಲ್ಲ ಒಂದು ಉತ್ತಮ ವಾತಾವರಣವನ್ನು ನಿರ್ಮಿಸಲು ಬೆಂಬಲಿಸುತ್ತದೆ. ಇದಲ್ಲದೆ, ಮಕ್ಕಳನ್ನು ಅಪಾಯಕಾರಿ ದುಡಿತ, ಬಾಲ್ಯವಿವಾಹ, ಮಕ್ಕಳ ಕಳ್ಳ ಸಾಗಣೆ ಮತ್ತು ಮಾರಾಟ ಹಾಗೂ ಇತರ ಶೋಷಣೆ ಮತ್ತು ದುರುಪಯೋಗಗಳಿಂದ ರಕ್ಷಣೆ ಒದಗಿಸುವುದಕ್ಕಾಗಿ ಕಟ್ಟುನಿಟ್ಟಾದ ಕಾನೂನಿನ ಪಾಲನೆ ಇರುವಂತಹ ಪರಿಸರ ನಿರ್ಮಿಸಲು ಯುನಿಸೆಫ್, ಸಹಾಯ ಮಾಡುತ್ತದೆ.

ಸಮಾನತೆಯನ್ನು ಜಾರಿ ಮಾಡಲು ಇರುವ ಕಂದಕಗಳು/ ಅಂತರಗಳನ್ನು ಹೋಗಲಾಡಿಸಲು ಹಾಗೂ ಆರೋಗ್ಯ ಸೇವೆ ಸೌಲಭ್ಯಗಳಲ್ಲಿ ಶ್ರೇಷ್ಠ ಗುಣಮಟ್ಟದ ಸೇವೆ ಒದಗಿಸುವುದಕ್ಕಾಗಿ ಯುನಿಸೆಫ್‌ ಬೆಂಬಲ ನೀಡುತ್ತದೆ. ಆರೋಗ್ಯ ಕಾರ್ಯಕ್ರಮಗಳನ್ನು ಪುರಾವೆ ಆಧಾರಿತ ಯೋಜನೆಗೆ, ಆಯವ್ಯಯ ನಿಗದಿಪಡಿಸುವುದು ಮತ್ತು ಉಸ್ತುವಾರಿಗಾಗಿ ಮಾಹಿತಿಗಳನ್ನು ಪಡೆಯುವುದು. ಸೃಜಿಸುವುದು ಮತ್ತು ಬಳಸುವುದಕ್ಕಾಗಿ ರಾಜ್ಯದ ಸಾಮರ್ಥ್ಯವನ್ನು ಹೆಚ್ಚಿಸಲೂ ಕೂಡಾ ಯುನಿಸೆಫ್ ಸಹಾಯ ಮಾಡುತ್ತದೆ.

ಮುಖ್ಯವಾಗಿ ನಗರ ಪ್ರದೇಶಗಳಲ್ಲಿರುವ ಕೊಳೆಗೇರಿಗಳೂ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಆರೋಗ್ಯ ಸೇವೆ ಒದಗಿಸಲು ಮತ್ತು ವಿಸ್ತರಿಸುವುದಕ್ಕಾಗಿ ಯುನಿಸೆಫ್ ಖಾಸಗಿ ವಲಯದ ಸಹಾಯ ಪಡೆದುಕೊಳ್ಳುತ್ತದೆ ಮತ್ತು ನವಜಾತ ಶಿಶುಗಳಿಗೆ ಆದಷ್ಟೂ ಬೇಗ ಹಾಲೂಡಿಸುವ ಪ್ರಮಾಣಗಳು ಕಡಿಮೆ ಇರುವುದು, ಅತಿ ಹೆಚ್ಚಿನ ಪ್ರಮಾಣದ ಸಿಸೇರಿಯನ್‌ ಹೆರಿಗೆಗಳನ್ನು ಹಾಗೂ ಅತಿಯಾದ ಆಂಟಿಬಯಾಟಿಕ್‌ (ನಂಜುನಾಶಕ ಔಷಧಿಗಳು) ಬಳಕೆಯಂತಹ ಸಮಸ್ಯೆಗಳನ್ನು ಬಗೆಹರಿಸುತ್ತದೆ.

ಸಿಡುಬು ರೋಗ ನಿರ್ಮೂಲನೆ, ದಡಾರ ನಿಯಂತ್ರಣ, ಹೊಸ ಲಸಿಕೆಗಳನ್ನು ಪರಿಚಯಿಸುವುದು, ನಗರ ಪ್ರದೇಶದ ಕೊಳಗೇರಿಗಳಲ್ಲಿ ಮತ್ತು ರಾಜ್ಯದಲ್ಲಿ ರೋಗ ನಿರೋಧಕ ಸಾಮರ್ಥ್ಯ ಕಡಿಮೆಯಿರುವ ಪ್ರದೇಶಗಳಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವುದೇ ಮೊದಲಾದ ರಾಜ್ಯ ಸರಕಾರದ ಕಾರ್ಯಕ್ರಮಗಳಿಗೆ ಸಹಾಯ ಮಾಡುತ್ತಾ ಯುನಿಸೆಫ್ ರಾಜ್ಯದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸಲು ಬೆಂಬಲ ನೀಡುತ್ತಿದೆ. ಗುಣಮಟ್ಟದ ಲಸಿಕೆಗಳನ್ನು ಖಾತ್ರಿಪಡಿಸಲು ರಾಜ್ಯದಲ್ಲಿ ಕೋಲ್ಡ್ ಚೈನ್ ಮತ್ತು ಸರಬರಾಜು ಸರಪಳಿ ಉತ್ತಮಗೊಳಿಸಲು ಯುನಿಸೆಫ್ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಪೌಷ್ಟಿಕಾಂಶದ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಜಾರಿ ಮಾಡಲು ರಾಜ್ಯ ಸರ್ಕಾರದಲ್ಲಿ ಉತ್ತಮ ಆಡಳಿತ ವ್ಯವಸ್ಥೆ ಹಾಗೂ ಸಾಮರ್ಥ್ಯ ಸಾಕಷ್ಟು ಇದೆ. ಹೀಗಾಗಿ ಅತ್ಯಂತ ದುರ್ಬಲ ಸಮೂಹಗಳಿಗೆ ಸರ್ಕಾರ ಒದಗಿಸುವ ಪೌಷ್ಟಿಕ ಆಹಾರದ ಸೇವೆಗಳು ತಲುಪುವುದನ್ನು ಖಾತ್ರಿಪಡಿಸುವ ದಿಶೆಯತ್ತ ಯುನಿಸೆಫ್‌ ಗಮನಹರಿಸಿದೆ.

ಸಮಯಕ್ಕೆ ಸರಿಯಾಗಿ ಸೇವೆಗಳನ್ನು ಒದಗಿಸುವುದೂ ಸೇರಿದಂತೆ ಸ್ವಚ್ಚತಾ ಆಂದೋಲನ  ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಾಮರ್ಥ್ಯವರ್ಧನೆಗೆ ಯುನಿಸೆಫ್  ಕೇಂದ್ರೀಕರಿಸಿದೆ. ಸರ್ಕಾರ ಮತ್ತು ಖಾಸಗಿ ವಲಯಗಳು ಮತ್ತು ಸಮುದಾಯ ಸಂಸ್ಥೆಗಳ ಸಹಯೋಗದೊಡನೆ ಜಿಲ್ಲೆ, ತಾಲೂಕು ಮತ್ತು ಪಂಚಾಯಿತಿಗಳಲ್ಲಿ ಸುಸ್ಥಿರ ಬಯಲು ಶೌಚ ಮುಕ್ತ ಸಮುದಾಯಗಳನ್ನು ಸೃಜಿಸುವ ಸಲುವಾಗಿ ಹೆಚ್ಚು ಸಂಖ್ಯೆಯ ಸ್ವಚ್ಛಗ್ರಾಹಿಗಳನ್ನು (ಸ್ವಚ್ಚತಾ ಸ್ವಯಂಸೇವಕರು) ರೂಪಿಸಲು ಯುನಿಸೆಫ್ ನೆರವ ನೀಡುತ್ತಿದೆ.

ನೀರಿನ ಸುರಕ್ಷತೆ ಮತ್ತು ಸುಭದ್ರತೆಗಾಗಿ ಆವಶ್ಯಕತೆಯಿರುವ ಯೋಜನೆಗಳಿಗಾಗಿ ಸುಧಾರಿತ ನೀತಿಗಳು ಮತ್ತು ಕಾರ್ಯತಂತ್ರವನ್ನು ರೂಪಿಸಲು ವಿವಿಧ ಇಲಾಖೆಗಳೊಡನೆ ಸಮನ್ವಯತೆಯನ್ನು ರಾಜ್ಯ ಸರ್ಕಾರವು ಹೊಂದಲು ಯುನಿಸೆಫ್‌ ವಕೀಲಿ ನಡೆಸಿದೆ.  

ಮಕ್ಕಳ ಸ್ನೇಹಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಮೂಲಕ  ಶಾಲೆ, ಅಂಗನವಾಡಿ ಕೇಂದ್ರಗಳು ಮತ್ತು ಆರೋಗ್ಯ ಸೇವಾ ಕೇಂದ್ರಗಳಲ್ಲಿ ನೀರಿನ  ಸುಸ್ಥಿರ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು  ಜಾರಿಗೆ ತರಲು ಅಧಿಕಾರಿಗಳ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ಬೆಂಬಲ ನೀಡಲಾಗಿದೆ. ಸಮುದಾಯಗಳು ಮತ್ತು ಸ್ಥಳೀಯ ಸಂಸ್ಥೆಗಳು ಉತ್ತಮ ರೀತಿಯಲ್ಲಿ ಭಾಗವಹಿಸುವಂತೆ ಮಾಡುವುದಕ್ಕಾಗಿ ನೀರು, ಶುಚಿತ್ವ ಮತ್ತು ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಕೈಗೊಳ್ಳುತ್ತಿರುವ ಎಲ್ಲಾ ಸರಕಾರಿ ಕಾರ್ಯಕ್ರಮಗಳಲ್ಲಿನ ಸಂಪರ್ಕ ವಿಧಾನಗಳಲ್ಲಿ ಸಾಮಾಜಿಕ ಮತ್ತು ವರ್ತನೆ ಬದಲಾವಣೆ ಮಾಡುವಂತೆ ಕೆಲಸ ಮಾಡುವುದೇ ಯುನಿಸೆಫ್‌ನ ಕಾರ್ಯಗಳ ಮುಖ್ಯ ಭಾಗವಾಗಿದೆ.

ಶೈಕ್ಷಣಿಕ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಸಮನ್ವಯಗೊಳಿಸುವುದು, ಅನುಷ್ಠಾನಗೊಳಿಸುವುದು ಮತ್ತು ಉಸ್ತುವಾರಿಗಾಗಿ ಸರಕಾರಿ ಇಲಾಖೆಗಳ ಸಾಮರ್ಥ್ಯ ಹೆಚ್ಚಿಸಲು ಯುನಿಸೆಫ್ ಸಹಾಯ ಮಾಡುತ್ತದೆ. ಮುಖ್ಯವಾಗಿ ಸಮುದಾಯದಲ್ಲಿ ಮೂಲೆಗುಂಪಾಗಿರುವ ವರ್ಗದವರೂ ಸೇರಿದಂತೆ ಸಮಾಜದ ಎಲ್ಲಾ ವರ್ಗದಲ್ಲಿರುವ ಶಾಲೆ ಬಿಟ್ಟವರು ಮತ್ತು ಅಪ್ರಾಪ್ತ ವಯಸ್ಸಿನ ಕಿರಿಯರನ್ನೂ ಸೇರಿಕೊಂಡಿರುವಂತೆ ಎಲ್ಲರಿಗೂ ತಲುಪಬಹುದಾದ ಮಾದರಿ ಪರ್ಯಾಯ ಪ್ರಾಥಮಿಕ ಶಿಕ್ಷಣಾ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ವಕೀಲಿ ನಡೆಸುವುದೂ ಕೂಡಾ ಯುನಿಸೆಫ್ ಪ್ರಯತ್ನಗಳಲ್ಲಿ ಸೇರಿದೆ.

ಮೂಲೆಗುಂಪಾಗಿರುವ ಸಮುದಾಯಗಳ ಹಾಗೂ ನಗರ ಪ್ರದೇಶಗಳಲ್ಲಿನ ಕೊಳೆಗೇರಿಗಳ ಹಾಗೂ ಅಂಗವಿಕಲತೆಯಿರುವ ಮಕ್ಕಳಲ್ಲಿ ಕಲಿಯುವಿಕೆಯನ್ನು ಹೆಚ್ಚಿಸಬಹುದಾದ ಶ್ರೇಷ್ಠ ಗುಣಮಟ್ಟವುಳ್ಳ ಮಾದರಿಗಳನ್ನು ಅಭಿವೃದ್ಧಿಪಡಿಸಲು  ತಂತ್ರಜ್ಞಾನ ಆಧಾರಿತ ಕಲಿಸುವ ಮತ್ತು ಕಲಿಯುವ ವಿಧಾನಗಳನ್ನು ಸಹ ಯುನಿಸೆಫ್ ಉಪಯೋಗಿಸುತ್ತದೆ.

111

ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳಿಸಲು ಅನುಕೂಲ ಮಾಡಿಕೊಡಲು ಸಾಮಾಜಿಕ ರಕ್ಷಣಾ ಯೋಜನೆಗಳ ಜಾರಿಯನ್ನು ಬಲಪಡಿಸಲು ಯುನಿಸೆಫ್ ಆದ್ಯತೆಯನ್ನು ನೀಡುತ್ತದೆ. ಮಕ್ಕಳ ಸಂರಕ್ಷಣಾ ಘಟಕಗಳನ್ನು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಬಲಪಡಿಸಿ ಮಕ್ಕಳ ರಕ್ಷಣಾ ಸೇವೆಗಳನ್ನು ಹಾಗೂ ಮಕ್ಕಳ ರಕ್ಷಣಾ ಉಸ್ತುವಾರಿ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ ಯುನಿಸೆಫ್‌ ಬೆಂಬಲಿಸುತ್ತದೆ.

ಮಕ್ಕಳು ಸಾಂಸ್ಥಿಕ ವ್ಯವಸ್ಥೆಯೊಳಗೆ ಬರದಂತೆ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಕುಟುಂಬಗಳನ್ನು ಸದೃಢಗೊಳಿಸುವ ಮತ್ತು ಸಾಂಸ್ಥಿಕ ವ್ಯವಸ್ಥೆಗೆ ಬೇಡಿಕೆ ಕಡಿಮೆ ಮಾಡುವ ಕಾರ್ಯತಂತ್ರದೊಂದಿಗೆ ಸಾಮಾಜಿಕ ರಕ್ಷಣಾ ಯೋಜನೆಗಳ ಸಂಪರ್ಕಗಳ ವಕೀಲಿಯಲ್ಲಿ ಕೇಂದ್ರೀಕರಿಸಲಾಗಿದೆ.. ಬಾಲ್ಯವಿವಾಹಗಳನ್ನು ತಡೆಗಟ್ಟಲು ಕಾನೂನು ಜಾರಿಯನ್ನು ಬಲಗೊಳಿಸಲು ಯುನಿಸೆಫ್ ರಾಜ್ಯದಲ್ಲಿ ಕೆಲಸ ಮಾಡುತ್ತಿದೆ ಮತ್ತು ಮಕ್ಕಳ ಮೇಲಾಗುವ ದೌರ್ಜನ್ಯ ಮತ್ತು ಬಾಲ್ಯವಿವಾಹಗಳ ವಿಚಾರಗಳನ್ನು ಸಾರ್ವಜನಿಕ ವಲಯಗಳಲ್ಲಿ ಚರ್ಚೆಯಾಗುವಂತೆ ಮಾಡಲು ಮತ್ತು ಈ ವಿಚಾರಗಳಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ರಾಜಕೀಯ ಪ್ರಾಮುಖ್ಯತೆಗಾಗಿ ಗಮನ ಹರಿಸುತ್ತಿದೆ.

ಮಧ್ಯಸ್ತಿಕೆಗಳಿಗೆ ಅವಕಾಶ ನೀಡುವ ಯುನಿಸೆಫ್ ಕಾರ್ಯಕ್ರಮಗಳನ್ನು ಜೀವನ ಚಕ್ರದ ಎರಡು ಹಂತಗಳ ಆಧಾರದಂತೆ ರೂಪಿಸಲಾಗಿದೆ – ಆರಂಭಿಕ  ಬಾಲ್ಯದ ಅಭಿವೃದ್ಧಿ  (0-6 ವರ್ಷಗಳು) ಮತ್ತು ಹದಿವಯಸ್ಸಿನವರ ಸಶಕ್ತತೆ (10-19 ವರ್ಷಗಳು) – ಇವು  ಮಕ್ಕಳು ಮತ್ತು ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳ ಫಲಿತಾಂಶಗಳಲ್ಲಿ ಹಾಸುಹೊಕ್ಕಾಗಿರುವಂತೆ ಯೋಜಿಸಲಾಗಿದೆ.

ರಾಜ್ಯದಲ್ಲಿ ಮೂರು ಜಿಲ್ಲೆಗಳು ಚಂಡಮಾರುತಕಗಳಿಗೆ ಈಡಾಗುವ  ಸಾಧ್ಯತೆಗಳಿರುವ  ಕಾರಣ ರಾಜ್ಯದ ಸಾಕಷ್ಟು ಜನರಿಗೆ ಆಗಾಗ್ಗೆ ಸಂಕಷ್ಟಕ್ಕೀಡಾಗುತ್ತಲೇ ಇರುತ್ತಾರೆ. ಸಾಂವಿಧಾನಿಕ ಸಂಸ್ಥೆಗಳಾದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಇನ್ನೂ ಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಮಯಕ್ಕೆ ಸರಿಯಾಗಿ ಆರೋಗ್ಯ ಸೇವೆಗಳನ್ನು ಒದಗಿಸಲು ಮತ್ತು ಹವಾಮಾನ ವೈಪರೀತ್ಯಗಳನ್ನು ಎದುರಿಸಬಲ್ಲ ಮತ್ತು ಸುಸ್ಥಿರ ನಿರ್ವಹಣೆಯನ್ನು ಹೊಂದಿರುವ ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಗಾಗಿ ರಾಜ್ಯ ಮತ್ತು ಆಯ್ದ ಜಿಲ್ಲೆಗಳ ಸಾಮರ್ಥ್ಯವರ್ಧನೆಯನ್ನು ಯುನಿಸೆಫ್ ಮಾಡುತ್ತಿದೆ.  

ರಾಜ್ಯದ ಬರಪೀಡಿತ ತಾಲೂಕುಗಳೊಂದಿಗೆ ತುರ್ತು ಸಂದರ್ಭಗಳನ್ನು ಎದುರಿಸಲು ಕ್ರಮಗಳು ಹಾಗೂ ಆಹಾರ ಮತ್ತು ಪೌಷ್ಟಿಕಾಂಶದ ಸುರಕ್ಷತೆಗಾಗಿ ಯೋಜನೆಯನ್ನು ನಿರ್ಮಿಸಲು ಯುನಿಸೆಫ್‌ ಕೆಲಸ ಮಾಡುತ್ತಿದೆ.

ಶಾಲಾ ಸುರಕ್ಷತೆಗಾಗಿ ವಿಪತ್ತು, ತೊಂದರೆ ಕಡಿಮೆಗೊಳಿಸುವ ಉಪಕ್ರಮಗಳಲ್ಲಿ  ಮಕ್ಕಳ ರಕ್ಷಣಾ ನೀತಿಗಳನ್ನು ಮುಖ್ಯವಾಹಿನಿಗೆ ತರಲೂ ಸಹ ಗಮನ ಹರಿಸುತ್ತಿದೆ.